ನಗುತ ನಗುತ

 

ನಗುತ ನಗುತ ಬಾರೆ ಬೇಗ 

ಜಗಜಗಿಸುವ ಹಸೆಗೆ ಈಗ ||ಪ||


ರಘುರಾಮನ ಪ್ರಾಣರಮಣಿ  

ಅಘಣಿತ ಗುಣ ಸೌಭಾಗ್ಯದಾಯಿನಿ ||ಅ ಪ||


ಹರುಷದಿಂದ ಜನಕ ಭೂಪ 

ವಿರಚಿಸಿದನು ಯಾಗವನ್ನು |

ಧರಣಿಯನ್ನು ಶೋಧನೆಮಾಡೆ 

ದೊರಕಿದ ಶ್ರೀ ಧರೆಯ ಜಾತೆಯೆ ||ನಗುತ||


ಬರದಿ ರಾಮಚಂದ್ರ ಬಂದು 

ಹರನ ಧನುವ ಜಯಿಸಿ ನಿಂದು |

ಕೊರಳೊಳು ಹಾರವ ಹಾಕೆ 

ಕರವ ಪಿಡಿದ ಸೀತಾದೇವಿಯೇ ||ನಗುತ||


ಮಣಿದು ಬೇಡೆ ನಾಗಚೂಡ 

ಮಣಿಯ ಮರುತ ತನಯಗಿತ್ತು |

ರಣಧೀರಗಳ ಒಲಿಸಿ ಗೆಲಿಸಿದ 

ಗುಣನಿಧಿ ಶ್ರೀ ಜಾನಕಿದೇವಿಯೆ ||ನಗುತ||


Comments

Popular Posts