ವಂದಿಪೆ ನಿನಗೆ ಗಣನಾಥಾ

 

ಮೊದಲೊಂದಿಪೆ ನಿನಗೆ ಗಣನಾಥಾ
ದೇವಾ ವಂದಿಪೆ ನಿನಗೆ ಗಣನಾಥಾ|
ಬಂದ ವಿಘ್ನಗಳ ಕಳೆ ಗಣನಾಥಾ||ಪ|| 

ಆದಿಯಲ್ಲಿ ನಿನ್ನ ಪಾದ ಪೂಜಿಸಿದ ಧರ್ಮರಾಯ|
ಸಾಧಿಸಿದ ರಾಜ್ಯ ಗಣನಾಥಾ ||ಮೊದಲೊಂದಿಪೆ|| 

ಹಿಂದೆ ರಾವಣನು ಮದದಿಂದ ನಿನ್ನ ಪೂಜಿಸದೆ|
ಸಂದ ರಣದಲಿ ಗಣನಾಥಾ ||ಮೊದಲೊಂದಿಪೆ|| 

ಮಂಗಳ ಮೂರುತಿ ಗುರು ರಂಗ ವಿಠಲನ ಪಾದ|
ಹಿಂಗದೆ ಭಜಿಪೆ ಗಣನಾಥಾ ||ಮೊದಲೊಂದಿಪೆ||

Comments

Popular Posts