ನೆನೆದವನೇ ಬಲು ಜಾಣ
ನೆನೆದವನೇ ಬಲು ಜಾಣ ಶಿವನ ||ಪ||
ಜಾಣ ಶಿವನ ನೋಡೋ ಶಿವನ ||ಅ ಪ||
ಸ್ವರ್ಗ ಮರ್ತ್ಯ ಪಾತಾಳಕೊಡೆಯ
ಪಾರ್ವತಿ ರಮಣನ ನೋಡೋ ಶಿವನ ||ನೆನೆದವನೇ||
ತಂದೆಯು ತಾಯಿಯು ಬಂಧುವು ಬಳಗವು
ಯಾರಿಗೆ ಯಾರುಂಟು ನೋಡೋ ಶಿವನ ||ನೆನೆದವನೇ||
ಮಧ್ವ ಮುನೀಶರು ಹೇಳಿದ ಮಾತು
ಸೆಟೆಯಲ್ಲವು ದಿಟ ನೋಡೋ ಶಿವನ ||ನೆನೆದವನೇ||
Comments
Post a Comment