ರಕ್ಷಿಸೆಮ್ಮನು ತಾಯೆ

 

ರಕ್ಷಿಸೆಮ್ಮನು ತಾಯೆ 
ಪೂರ್ಣ ಕಟಾಕ್ಷದಿ ಮಹಾಮಾಯೇ ||ಪ||

ದಕ್ಷನ ವರಸುತೆ ತಕ್ಷಕ ಭೂಷಿತೆ 
ರಕ್ಷಿಸು ಸುಜನ ಸುರಕ್ಷಿತದಿಂದಲಿ ||ಅ ಪ||

ಹಂಬಲಿಸುವೆ ನಾನು 
ನಿನ್ನ ಪಾದಾಂಬುಜ ಯುಗಳನ್ನು ತಾಯೆ |
ಶುಂಭ ನಿಶುಂಭ ದೈತ್ಯ ಸಂಹಾರಿಣಿ |
ಬೆಂಬಿಡದೀಗಲೆ ಕರುಣಾದಿಂದಲಿ || ರಕ್ಷಿಸೆಮ್ಮನು ||

ಬಂಧನವನು ಬಿಡಿಸೆ 
ಸುಖತರದಿಂದಲೆನ್ನನು ಇರಿಸೆ |
ಮಂದರಾಗಿರಿಧರನಿಗೆ ಸಹಜಾತೆ |
ಬಂದು ಒಂದಿಪೆ ನಿನ್ನನು ಜಗನ್ಮಾತೆ || ರಕ್ಷಿಸೆಮ್ಮನು ||

ಸಾಸಿರ ರವಿಭಾಷೆ 
ಸುರಮುನಿ ತೋಷ ನಿರತ ಪೋಷೆ |
ಈಶ ದೋಷ ಬಯಾನಾಶ ಪರಾತ್ಪರ |
ಪಾಶದಿಂದಲಿ ನಿನ್ನ ದಾಸನೆಂದೆನಿಸುತ  || ರಕ್ಷಿಸೆಮ್ಮನು ||

ಚಿತ್ರಾಪುರ ಸ್ಥಳದಿ 
ನೀ ನಿಪ್ಪ ದಯಾತೆರದಿ ತಾಯೆ |
ಮುಪ್ಪುರ ಹರ ವಿಶ್ವನಾಥನ ಚರಣದಿ |
ಇಪ್ಪ ಪಾಲಿಪ ದುರ್ಗಾಪರಮೇಶ್ವರಿ || ರಕ್ಷಿಸೆಮ್ಮನು ||

Comments

Popular Posts