ಸ್ವಾಮಿಯ ನೋಡುವ ಬನ್ನಿ

 

ಸ್ವಾಮಿಯ ನೋಡುವ ಬನ್ನಿ 
ಸುಪ್ರೇಮಿಯ ನೋಡುವ ಬನ್ನಿ ||ಪ||

ಆತಗೆ ಗಂಗೆಯ ಮುಕುಟ, ಅಂಬರವೇ ಹೂತೋಟ |
ಪಾತಾಳವೆ ಚಿನ್ನದ ಮನೆಯಂತೆ, ಬೊಕ್ಕಣದವರು ಇಂದ್ರಾಣಿಗಳಂತೆ ||ಸ್ವಾಮಿಯ||

ಭೂಮಿ ತಾ ತೇರಂತೆ, ಭ್ರಹ್ಮನು ಸಾರಥಿಯಂತೆ |
ಸೋಮ ಸೂರ್ಯರೇ ಗಾಲಿಗಳಂತೆ, ಸರ್ಪನ ಶಿಖೆಯೇ ಹಿಡಿಗಾಣಂತೆ ||ಸ್ವಾಮಿಯ||

ಮಾಧವನೇ ಶರವಂತೆ, ಮೇಲ್ಭೂಧರವೇ ಧನುವಂತೆ |
ಆದಿಶೇಷನೇ ಬಿಲ್ಲೆಳೆಯಂತೆ, ಅಮೃತಶರಸಿಯೇ ಬತ್ತಳವಂತೆ ||ಸ್ವಾಮಿಯ||

ಎಂಟು ಮೈಯ್ಯವನಂತೆ, ಯಶವೈದು ಮುಖವಂತೆ |
ನೆಂಟನ ದೇಹದಿ ಸಿಲುಕಿಹನಂತೆ, ನಾರಿಗೆ ಭಾನ್ಡವನಿತ್ತವನಂತೆ ||ಸ್ವಾಮಿಯ||

ಭೂಕೈಲಾಸವಿದೆಂದು ಹರ ಬಹು ಸಂತೋಷದಿ ಬಂದು |
ಶರಣು ಶ್ರೀಪುರದಲಿ ನೆಲೆಸಿಹನಂತೆ ಸರ್ವ ಪಾಪ ಪರಿಹರಿಸುವನಂತೆ ||ಸ್ವಾಮಿಯ|| 

Comments

Popular Posts