ಆಡುತ ಬಾರಮ್ಮ

 

ಆಡುತ ಬಾರಮ್ಮ ನಲಿ ನಲಿದಾಡುತ ಬಾರಮ್ಮ ||ಪ||

ಆಡುತ ವರಗಳ ನೀಡುತ ಕರುಣದಿ |
ನೋಡುತ್ತಾ ದಯದಿಂದಾ ಲಕ್ಷ್ಮೀ ||ಅ. ಪ||

ಬೇಸರ ಬೇಡಮ್ಮಾನಿಮ್ಮಯ ದಾಸರ ದಾಸನು ನಾ ತಾಯೆ  |
ವಾಸನ ಪೂಜಿತೆ ವನರುಹನೇತ್ರೆ |
ಸಾಸಿರ ನಾಮದ ವಾಸುದೇವನ ಸತಿ ||ಆಡುತ||

ಕರೆದರೆ ಓ ಎಂದು ಭಕ್ತರ ಮೊರೆಯಲಾಲಿಸೆ  ಬಂದು ತಾಯೆ |
ಕರುಣದಿ ಶರಣರ ಪೊರೆದು ರಕ್ಷಿಸುವಂತ |
ಮುರಹರ ವೆಂಕಟ ರಾಮಣನರ್ಧಾಂಗಿಯೇ ||ಆಡುತ||

ಧರೆಯೊಳಧಿಕವಾದ ಪುಳಿನ ಪುರದೊಳು ನೆಲೆಯಾದ ತಾಯೆ |
ಶರಣಾಗತರಿಗೆ ಉನ್ನತ ವರವಿತ್ತು |
ಗುರುದತ್ತಾತ್ರೇಯ ತಾಯೆ ಮೂಕಾಂಬಿಕೆ ||ಆಡುತ|| 

 

Comments

Popular Posts