ಪೊರೆ ಶಂಕರ
ಪೊರೆ ಶಂಕರ ಕರುಣಾಕರ ||ಪ||
ದುರಿತ ವಿದೂರ ಗರಳ ಕಂಧರ |
ದುರಿತಾ ವಿದೂರ ಗರಳ ಕಂಧರ ||ಅ ಪ||
ಶಶಿಚೂಡನೇ ಭಸಿತಾಂಗನೇ |
ವಾಸವಾದಿ ವಂದ್ಯ ಪಶುಪತಿ ಪಾಹಿ ||ಪೊರೆ||
ಚಂದ್ರವಿಕ್ರಮ ಮಾರ್ತಾಂಡ ತೇಜನೇ |
ದಂಡ ದನುಜ ಹರ ರುಂಡಮಾಲ ಧರ ||ಪೋರೆ||
ತಾಪಸಾಳಿಹೇ ಪದ್ಮವಾಸನೇ |
ತಾಪರಹಿತನೇ ಪಾಪನಾಶಕನೇ ||ಪೊರೆ||
Comments
Post a Comment