ಭುವನೇಶ್ವರಿಯ
ಭುವನೇಶ್ವರಿಯ .. ನೆನೆ ಮಾನಸವೆ..
ಭವ ಬಂಧಗಳ ಭೀತಿಯ ಬಿಡುವೆ..||ಪ||
ಭವದಲಿ ಬರಿದೇ ನವೆಯದೆ ನೋಯದೇ
ತವ ಸುವಿಲಾಸದಿ ತಣಿಯುವೆ..ಸುಖಿಸುವೆ.||ಭುವನೇಶ್ವರಿಯ||
ವೃಜಿನಮ್ಗಳನು ವಿದಳಿಪ ಮಾತೆಯ
ತ್ರಿಜಗ ಜ್ಜನನಿಯ ತ್ರಿಗುಣಾತೀತೆಯ ||ಭುವನೇಶ್ವರಿಯ||
ನಿಜ ಭಕ್ತಾವನ ಸುರವರ ಸುರಭಿಯ.. |
ಅಜ ಸನ್ನುತ ಶ್ರಿ ಹರಿಕೇಶಾಂಗಿಯ… ||ಭುವನೇಶ್ವರಿಯ||
Comments
Post a Comment