ಮುದ್ದು ತಾರೋ ರಂಗ
ಮುದ್ದು ತಾರೋ ರಂಗ ಎದ್ದು ಬಾರೋ ||ಪ||
ಶುದ್ಧವಾದ ಕರ್ಪೂರದ ಕರಡಿಗೆಯ ಬಾಯೊಳೊಮ್ಮೆ ||ಅಪ||
ವಿಷವನುಣಿಸಲು ಬಂದ ಅಸುರೆ ಪೂತನಿಯ ಕೊಂದ |
ವಶವನಲ್ಲ ಮಗನೆ ನಿನ್ನ ವಿಷವನುಂಡ ಬಾಯೊಳೊಮ್ಮೆ ||ಮುದ್ದು||
ಕಡೆವ ಸಮಯದಿ ಬಂದು ಕಡೆವ ಸತಿಯ ಕರವ ಪಿಡಿದು |
ಕಡೆದ ಬೆಣ್ಣೆ ಮೊಸರನ್ನೆಲ್ಲಾ ಒಡನೆ ಮೆದ್ದ ಬಾಯೊಳೊಮ್ಮೆ ||ಮುದ್ದು||
ತೊರವೆಯ ನಾರಸಿಂಹ ವರದ ಶ್ರೀ ಪುರಂದರ ವಿಠಲ |
ಹರವಿಯ ಹಾಲ ಕುಡಿದ ನೊರೆ ಹಾಲಿನ ಬಾಯೊಳೊಮ್ಮ ||ಮುದ್ದು||
Comments
Post a Comment