ದಾಸನೆನಿಸೋ ಎನ್ನ

 

ದಾಸನೆನಿಸೋ ಎನ್ನ,  ಶ್ರೀನಿವಾಸ ಪಾಲಿಸೋ ಎನ್ನಾ ||ಪ||

ಆಶಪಾಶಗಳಲ್ಲಿ ಘಾಸಿ ಬಿದ್ದೇನೋ ರಂಗ |
ದೋಷ ರಹಿತ ಪರಮೇಶ ರಕ್ಷಿಸೋ ಎನ್ನಾ || ದಾಸನೆನಿಸೋ ||

ತರಳ ಪ್ರಹ್ಲಾದನ ಸರಳ ಭಕ್ತಿಗೆ ಮೆಚ್ಚಿ |
ದುರುಳ ದೈತ್ಯನ ಪಿಡಿದು, ಕರುಳ ಬಗೆದ ಹರಿ ||ದಾಸನೆನಿಸೋ||

ಎಲ್ಲ ಭಕ್ತರ ಮನ ಸಲ್ಲಿಸಿ ಸಲಹುವ |
ಮಳ್ಳಿನಾಥ ಪುರದ ಚೆಲ್ವ ಶ್ರೀ ಕೃಷ್ಣನೆ || ದಾಸನೆನಿಸೋ||

Comments

Popular Posts