ಏನಾಯ್ತು ರಂಗನಿಗೆ
ಏನಾಯ್ತು ರಂಗನಿಗೆ ನೋಡಿರಮ್ಮ |
ನಿಧಾನಿಸಿ ಎನಗೊಮ್ಮೆ ಪೇಳಿರಮ್ಮ ||ಪ||
ಪುಟ್ಟಿದಾರಭ್ಯ ಕಣ್ಣ ಮುಚ್ಚನಮ್ಮ |
ತಾನು ಎಸ್ತಾದರೊ ಹಾಲನ್ನುಣ್ಣನಮ್ಮ |
ತಟುಕು ಮುಖ ಮೇಲಕೆತ್ತನಮ್ಮ |
ಹೀಗೆ ಎಷ್ಟು ಹೇಳಲಿ ಬಾಯ ಮುಚ್ಚನಮ್ಮ ||ಏನಾಯ್ತು||
ಕಾಯ ಇದ್ಧ್ಹಾಗಿದ್ದು ಹೆಚ್ಚಿತಮ್ಮ |
ಹೆತ್ತ ತಾಯಿಗೆ ನೆಲವಿಲ್ಲದಾಯಿತಮ್ಮ |
ನೋಯ ನೋಟದಿ ಅಬ್ದಿ ಬತ್ತಿತಮ್ಮ |
ಬಾಯೊಳಗೆ ವಿಶ್ವ ತೋರಿತಮ್ಮ ||ಏನಾಯ್ತು||
ಅತ್ಯಂತ ಮಾತುಗಳನ್ನಾಡಿದನಮ್ಮ |
ಸತ್ಯಾಗೆ ಕುದುರೆಯನ್ನೇರುವನಮ್ಮ |
ನಿತ್ಯ ನಿರ್ದೋಷ ಪುರಂದರ ವಿಠ್ಠಲ |
ಭಕ್ತರ ಸಲಹುವ ದೇವನಮ್ಮ ||ಏನಾಯ್ತು||
Comments
Post a Comment