ಏತರ ಕಟಪಟಿ

 

ಏತರ ಕಟಪಟಿ ಒಂದಿನ

ಹೋಗುತಿದ್ದೆ ಲಟಪಟಿ ||ಪ||


ಬರೋವಾಗ್ಗೆ ಏನು ತಂದೆ

ಬರುತಲೆ ಎಲ್ಲಾನು ನನ್ನದೆಂದೆ |

ದುಡ್ಡು ಕೂಡಿಟ್ಟು ಬಳಿದು ಹೋಗುವಾಗ |

ಬಳಲಿ ಬಳಲಿ ಅಳುಮಾರಿಗೆ ಬಂದೆ ||ಏತರ||


ದೊಡ್ಡ ಮನೆಯ ಕಟ್ಟಿ ಅದರೊಳು

ಮಡದಿಯ ಒಯ್ದಿಟ್ಟೆ |

ಮಡದಿಗೆ ಮೋಹದ ಮಗು ಒಂದು ಹುಟ್ಟಿ |

ಅದರ ಮೇಲೆ ನೀ ಮನಸಿಟ್ಟೆ ||ಏತರ||


ಸಂಸಾರ ಬಲು ಖೊಟ್ಟಿ 

ಅದರೊಳು ಬಿದ್ದಿದ್ದಿ ಕಾಲ್ಕಟ್ಟಿ |

ತಂದೆ ಪುರಂದರವಿಠಲರಾಯನ |

ಧ್ಯಾನವನ್ನೆ ಮರೆತು ಬಿಟ್ಟೆ ||ಏತರ||

Comments

Popular Posts