ಮಹಿಷಾಸುರ ಮರ್ಧಿನಿ
ಮಹಿಷಾಸುರ ಮರ್ಧಿನಿ
ನಮಾಮಿ ಮಹಿಷಾಸುರ ಮರ್ಧಿನಿ ||ಪ||
ಮಹಿಷ ಮರ್ಧಿನಿ ಪರ್ವತೇಜದೊಳಹಿಶಯನ
ಸಖನರಸಿ ಪಾರ್ವತಿ ||ಅ ಪ||
ಖೂಳ ದೂಮ್ರಾಕ್ಷನ ಕಾಳಗದಲಿ ಕೊಂದೆ |
ಪಾಲಲೋಚನನರ್ಧದೇಹಿ
ಕರಾಳಿ ಮಹಾಂಕಾಳಿ ಶಾಂಭವಿ ||ಮಹಿಷಾಸುರ||
ಚಂಡ ಮುಂಡಾರ್ದಿನಿ ಚಂಡಿ ಸ್ವರೂಪಿಣಿ |
ರುಂಡದಲಿ ಭ್ರಮೆಗೊಂಡು ತವಕದಿ
ಚೆಂಡನಾಡಿದ ಚಾಮುಂಡೇಶ್ವರಿ ||ಮಹಿಷಾಸುರ||
ರಕ್ತಭೀಜಾರ್ದಿನಿ ಶಕ್ತಿಸ್ವರೂಪಿಣಿ |
ರಕ್ತವಸನದ ಹೇ ಮೂಕಾಂಬಿಕೆ
ಭಕ್ತ ಪಾಲಿನಿ ಮುಕ್ತಿದಾಯಿನಿ ||ಮಹಿಷಾಸುರ||
ಶ್ಯಾಮಸುಂದರ ಮೋಹ ಕಾಮುಕನಾಶಿನಿ |
ಭೂಮಿಗೊಡೆಯ ಶ್ರೀರಾಮಚಂದ್ರನ
ಪ್ರೇಮ ರೂಪಿಣಿ ಭಾಮೆ ಅರಗಿಣಿ ||ಮಹಿಷಾಸುರ||
Comments
Post a Comment