ಹೇ ಶಿವಶಂಕರ
ಹೇ ಶಿವಶಂಕರ ನಟ ಅಭಯಂಕರ
ಶಂಭೋ ಶಂಕರ ನಮಸ್ತುತೆ ||ಪ||
ಗಿರಿಜಾ ರಮಣನೆ ಪಾಲಾಕ್ಷ ಶಿವನೆ
ನಂಬಿದೆ ನಿನ್ನ ಮಹದೇವನೇ ||ಅ ಪ||
ಈಶ ಸರ್ವೇಶ ಗೌರೀಶ ಜಗದೀಶ |
ನಟನ ವಿಶಾರದ ನಟರಾಜನೇ |
ಹೇ ಜೀವಾತ್ಮನೇ ಹೇ ಪರಮಾತ್ಮನೇ |
ನಂಬಿದೆ ನಿನ್ನ ಮಹದೇವನೇ ||ಹೇ||
ಭಯ ಪರಿಹಾರಕ ದುರಿತ ನಿವಾರಕ |
ಸಾಕಲೋದ್ಧಾರಕ ಜಗದೀಶನೇ |
ಹೇ ಜೀವಾತ್ಮನೇ ಹೇ ಪರಮಾತ್ಮನೇ |
ನಂಬಿದೆ ನಿನ್ನ ಮಹದೇವನೇ ||ಹೇ||
ಕಷ್ಟ ನಿವಾರಕ ಇಷ್ಟ ಪ್ರದಾಯಕ |
ಸೃಷ್ಟಿಯ ಪಾಲಕ ಪರಮೇಶನೇ |
ಹೇ ಜೀವಾತ್ಮನೇ ಹೇ ಪರಮಾತ್ಮನೇ |
ನಂಬಿದೆ ನಿನ್ನ ಮಹದೇವನೇ ||ಹೇ||
Comments
Post a Comment