ನಾರಾಯಣ ನಿನ್ನ ನಾಮದ
ನಾರಾಯಣ ನಿನ್ನ ನಾಮದ ಸ್ಮರಣೆಯ
ಸಾರಾಮೃತವು ಎನ್ನ ನಾಲಿಗೆಗೆ ಬರಲಿ |
ನಾರಾಯಣ... ನಾರಾಯಣ... ನಾರಾಯಣ.. ||ಪ||
ಕಷ್ಟದಲ್ಲಿರಲಿ ಉತ್ಕೃಷ್ಟದಲ್ಲಿರಲಿ
ಎಷ್ಟಾದರೂ ಮತಿಗೆಟ್ಟು ಇರಲಿ |
ಕೃಷ್ಣ ಕೃಷ್ಣ ಎಂದು ಶಿಷ್ಟರು ಪೇಳುವ
ಅಷ್ಟಾಕ್ಷರ ಮಹಾ ಮಂತ್ರದ ನಾಮವ ||ನಾರಾಯಣ||
ಕನಸಿನೊಳಗಾಗಲಿ ಮನಸಿನೊಳಗಾಗಲಿ
ಮನಸು ಕೆಟ್ಟಿರಲಿ ಮುನಿದಿರಲಿ |
ಜನಕಜಾಪತಿ ನಿನ್ನ ನಾಮದ ಸ್ಮರಣೆಯ
ಕನಸಿನೊಳಗೊಮ್ಮೆ ನೆನೆಯುವ ಹಾಗೆ ||ನಾರಾಯಣ||
ಸಂತತ ಹರಿ ನಿನ್ನ ಸಾಸಿರ ನಾಮವ
ಅಂತರಂಗದ ಒಳಗಿರಿಸಿ |
ಎಂತೋ ಪುರಂದರ ವಿಠಲ ರಾಯನ
ಅಂತ್ಯ ಕಾಲದಲ್ಲಿ ಚಿಂತಿಸೋ ಹಾಂಗೆ ||ನಾರಾಯಣ||
Comments
Post a Comment