ಧವಳಾ ಗಂಗೆಯ
ಧವಳಾ ಗಂಗೆಯ ಗಂಗಾಧರ ಮಹಾಲಿಂಗ
ಮಾಧವನ ತೋರಿಸಯ್ಯಾ ಗುರುಕುಲೋತ್ತುಂಗ || ಪ ||
ಅರ್ಚಿಸಿದವರಿಗಭೀಷ್ಟವ ಕೊಡುವ |
ಸ್ವಚ್ಚನೆ ನೊಸಲಲ್ಲಿ ತ್ರಿರೇಖೆ ಇಡುವಾ |
ಮೆಚ್ಚಿದ ಗೌರಿಯ ನೋಡಿ ಒಡಂಬಡುವ |
ನಮ್ಮಚ್ಯುತಗಲ್ಲದ ಅಸುರರ ಬಡಿವ || ಧವಳಾ ||
ಮಾರನ ಗೆಲಿದ ಮನೋಹರ ಮೂರ್ತಿ |
ಸಾಧು ಸಜ್ಜನರಿಗೆ ಸುರ ಚಕ್ರವರ್ತಿ |
ಧಾರಿಣಿಯೊಳಗೆ ತುಂಬಿತು ನಿನ್ನ ಕೀರ್ತಿ |
ವೊರಂತೆ ಬಸವನೇರುವುದು ನಿನಗರ್ತಿ || ಧವಳಾ||
ಚೆನ್ನ ಪ್ರಸನ್ನ ಶ್ರೀಹಯವದನನ್ನ |
ಅನುದಿನ ನೆನೆವಂತೆ ಮಾಡೋ ನೀ ಎನ್ನ|
ಇನ್ನೊಬ್ಬರ ಕಾಣೆ ಗುರುವೆಂದೆ ನಾ ನಿನ್ನ|
ಇನ್ನಾದರು ಕಾಯೋ ಧೀರಾ ಮುಕ್ಕಣ್ಣ || ಧವಳಾ ||
Comments
Post a Comment