ಗೋವಿಂದನ ಧ್ಯಾನ
ಗೋವಿಂದನ ಧ್ಯಾನ ಬಲು ಶುಭಕರವು ||ಪ||
ಭಾವಿಸಿ ನೋಡಲು ಬಹು ಜನ್ಮಗಳ ಪಾಪಹರವು ||ಅ ಪ||
ಒಂದಾವರ್ತಿ ನೆನೆಯಲು ಭವಬಂಧ ಖಿಲವೋ |
ಹಿಂದಿನ ಸುಕೃತಕೆ ಮುಂದಿನ ಸುಕೃತಾನಂತ ಫಲವೋ ||ಗೋವಿಂದನ||
ವಿಧವಿಧ ಸಾಧನಕ್ಕಿಂತ ಇದು ಘನವೋ |
ಉದರಂಭರಣಕ್ಕುಡುವ ವಸನಕ್ಕೆ ಇದು ಸುಸಾಧವನವೋ ||ಗೋವಿಂದನ||
ಶ್ರೀರಾಮ ಪುರಂದರವಿಠಲನ ಪಾದವು |
ಸೇರಿದವರಿಗೆ ಈ ಹರಿಧ್ಯಾನ ಕ್ರೂರಗೆ ದೂರವೋ ||ಗೋವಿಂದನ||
Comments
Post a Comment