ಪಾಲಿಸೊ ಹರಿಯೇ

 

ಪಾಲಿಸೊ ಹರಿಯೇ ಪ್ರಸಾದವ  
ನಿನ್ನ ಕಾಲಿಗೆರಗುವೆವು ಮಾಧವ ||ಪ||

ಪರಮಪುರುಷ ಕರಿವರದ ನಾರಾಯಣ 
ಶರಣ ಸಂತರಿಗೆಲ್ಲ ಸಿರಿಮುಡಿ ಗಂಧವ ||ಪಾಲಿಸೊ||

ನಳಿನಲೋಚನ ತವಗಳದಿ ಶೋಭಿಪ ವರ 
ಎಳೆ ತುಳಸಿಯ ಮಾಲೆ ಚೆಲ್ವಾ ಮೂರುತಿ ವಿಷ್ಣು ||ಪಾಲಿಸೊ||

ಸೃಷ್ಟಿಗೊಡೆಯ ಪರಮೇಷ್ಟಿ ಜನಕರಾಮ 
ಇಷ್ಟ ವೆಂಕಟರಾಯ ಇಷ್ಟಾರ್ಥ ವರಗಳ ||ಪಾಲಿಸೊ||  

Comments

Popular Posts