ಮಹಾದೇವ ಮಾಯಾತೀತ

 

ಮಹಾದೇವ ಮಾಯಾತೀತ ಮಹಿಮಾಂತರಂಗ ||ಪ||

ದಯಾಸಾಗರ ಶಂಕರ ಶ್ರೀಕರ ದಯಾಸಾಗರ ಶಂಕರ ||ಅ ಪ||

ಪರಂಜ್ಯೋತಿ ಭಾಸುರ ನಮೋ ಚಂದ್ರಶೇಖರ|
ಪಾಹಿ ಪಾರಾತ್ಪರ ಶರಣ ಸುಧಾಕರ ||ದಯಾಸಾಗರ||

ತಂದೆಯು ನೀನೆ ತಾಯಿಯು ನೀನೆ |
ಬಂದುವು ಬಳಗವು ಭಾಗ್ಯವು ನೀನೆ ||ದಯಾಸಾಗರ||

ಚಿತ್ತಶಾಂತಿದಾತ ನೀನೆ ಸರ್ವಲೋಕನಾಥ ನೀನೆ |
ನಂಬಿ ನಾನು ಬೇಡುವೆ ಓ ದೇವ ದೇವಾ ||ದಯಾಸಾಗರ||

Comments

Popular Posts