ಮಂದಿರಕ್ಕೆ ಬಾ ಬಾ
ಮಂದಿರಕ್ಕೆ ಬಾ ಬಾ ಬಾರೋ ಹರಿ |
ಮನ ಮಂದಿರಕ್ಕೆ ಬಾ ಬಾ ಬಾರೋ ಹರಿ ||ಪ||
ವಾರಿಜಭವ ಮೊದಲಾದ ಅಮರರ
ಪರಿವಾರ ಸಹಿತ ಸುಖ ತೋರುವಂತೆ ನೀ ||ಮಂದಿರ||
ದಯಾಮಾಡೆನ್ನಲಿ ಇಬಗೊಲಿದವನೇ
ಮೋದಗೊಳಿಸು ನೀ ಪ್ರಹ್ಲಾದವರದ ||ಮಂದಿರ||
ಶ್ರೀಕಮಲೇಶ ವಿಠ್ಠಲ ಪಾಲಿಸೋ
ಅನುಮಾನ ಬೇಡ ತವದಾಸನೆನಿಸೋ ||ಮಂದಿರ||
Comments
Post a Comment