ಕೃಷ್ಣ ಕೃಷ್ಣ ಕೃಷ್ಣಯೆಂದು

 

ಕೃಷ್ಣ ಕೃಷ್ಣ ಕೃಷ್ಣಯೆಂದು ಮೂರುಬಾರಿ ನೆನೆಯಿರೊ ||ಪ||

ಸಂತುಷ್ಟವಾಗಿ ಮುಕುತಿ ಕೊಟ್ಟು ಮಿಕ್ಕ ಭಾರ ಹೊರುವನೋ ||ಅ ಪ|| 


ಸಕಲ ವೇದ ಶಾಸ್ತ್ರ ಪಠಿಸಿ ಸಾರವನ್ನು ತಿಳಿದರೇನು |

ಮಕರ ಕುಂಡಲಧರನ ನಾಮಕೆ ಸಾಟಿಯಿಲ್ಲವೊ ||ಕೃಷ್ಣ||


ಕಮಲನಾಭನ ಚಿನ್ಹೆಯನ್ನು ಧರಿಸಿಕೊಂಡು ಮೆರೆಯಿರೊ |

ಯಮನ ಭಟರು ನೋಡಿ ಅಂಜಿ ಅಡವಿ ಹೊಗುವರೋ ||ಕೃಷ್ಣ||


ಜನ್ಮವೆತ್ತಿ ಮಧ್ವಮತವ ಅನುಸರಿಸಿ ನಡೆಯಿರೊ |

ಸುಮ್ಮಾನದಿ ಸಿರಿಕೃಷ್ಣ ತನ್ನ ಲೋಕ ಕೊಡುವನೋ ||ಕೃಷ್ಣ||

Comments

Popular Posts