ಉಮಾನಾಥ ಶಂಕರ

 

ಉಮಾನಾಥ ಶಂಕರ ಮಹಾದೇವ |
ದೇವ ದೇವ ದೇವ ಮಹಾದೇವ ||ಪ||

ನಿತ್ಯ ನಂಬಿದೆ ಬೆಂಬಿಡದೆ ನೋಡು |
ನೋಡು ನೋಡು ನೋಡು ಕಾಪಾಡು ||ಉಮಾನಾಥ||

ಕೈಲಾಸ ಗಿರಿ ಪುರವಾಸ |
ವಾಸ ವಾಸ ವಾಸ ಗೌರೀಶ ||ಉಮಾನಾಥ||

ನಂದಿವಾಹನ ನೀಲಕಂಠ ರೂಪ |
ರೂಪ ರೂಪ ರೂಪ ದೀಪನೆ ||ಉಮಾನಾಥ||

Comments

Popular Posts