ಪರಮ ಪಾವನೆ ಲಕ್ಷ್ಮಿ
ಪರಮ ಪಾವನೆ ಲಕ್ಷ್ಮಿ ಬಾರೆ
ದಯೆತೋರೆ ಸಮರ್ಯಾರೆ
ಯದುಗಿರಿ ವರನಿಲಯೇ ||ಪ||
ಕ್ಷೀರಸಾಗರ ವಾಸೆ ಸರಸಿ ರುಹಾಕ್ಷಿಯೇ |
ಸರಸಿಜನಾಭನ ಪರಮ ಕಲ್ಯಾಣಿಯೆ |
ಆದರದಿಂ ಪೊರೆ ದೇವಿ ಸಮರ್ಯಾರೆ
ದಯೆತೋರೆ ಯದುಗಿರಿ ವರನಿಲಯೇ ||ಪರಮ||
ಭಕ್ತ ದೇವೇಂದ್ರನ ಮೊರೆಯನು ಕೇಳಿ |
ತ್ವರಿತದಿ ನಹುಷನ ಗರ್ವ ಭಂಗವಮಾಡಿ |
ಇಂಧ್ರಭೋಗವನಿತ್ತ ದೇವಿ ದಯೆತೋರೆ
ಸಮರ್ಯಾರೆ ಯದುಗಿರಿ ವರನಿಲಯೇ ||ಪರಮ||
ಕಾಮ ಜನಕನ ಕಂಸಾರಿ ಪ್ರಿಯೆ |
ರುಕ್ಮಿಣಿ ದೇವಿಯೇ ಪರಮ ಕಲ್ಯಾಣಿಯೇ |
ಕೃಷ್ಣನ ಪ್ರಿಯೆ ಲಕ್ಷ್ಮಿ ಬಾರೆ ದಯೆತೋರೆ
ಸಮರ್ಯಾರೆ ಯದುಗಿರಿ ವರನಿಲಯೇ ||ಪರಮ||
Comments
Post a Comment