ಓಂ ನಮೋ ಭಕ್ತಪಾಲ

 

ಓಂ ನಮೋ ಭಕ್ತಪಾಲ

ಓಂ ನಮೋ ನಾಟ್ಯಲೀಲಾ ||ಪ||


ನೀಲಕಂಠ ಚರ್ಮಾಂಭರಧಾರಿ

ಢಮಢಮಢಮಢಮ ಢಮರೂಧಾರಿ| 

ಗಂಗಾ ಗೌರಿ ಹ್ರದಯವಿಹಾರಿ |

ಸಕಲ ಸಾಧು ಜನ ಪ್ರೇಮ ವಿಹಾರಿ | ನಮೋ ||ಓಂ ||


ಸಕಲ ಜಗಕೆ ನೀನೆ ದಾರಿ

ಪಾರ್ವತಿ ಪ್ರಿಯ ಹರ ಓಂಕಾರಿ |

ಎಲ್ಲ ವೇದಗಳ ಸಾಕಾರಿ |

ಪಾಂಡುರಂಗನ ಭಕ್ತ ವಿಹಾರಿ | ನಮೋ ||ಓಂ ||


ಷಣ್ಮುಖ ಪಿತನೆ ಸುಮನೋಹಾರಿ

ಕೈಲಾಸವಾಸಿ ತ್ರಿಶೂಲಧಾರಿ |

ಫಣಿಗಣ ಭೂಷಿತ ಚರ್ಮಧಾರಿ |

ಮ್ರತ್ಯುಂಜಯ ಹರ ಭಯ ಪರಿಹಾರಿ | ನಮೋ ||ಓಂ ||


ಮಂಗಳ ಮೂರತಿ ಸುಂದರ ದೇವ

ಹಣೆಯಲಿ ಹೆಚ್ಚಿನ ಕಣ್ಣಿಹ ದೇವ |

ಶಂಕರಹಿತ ಯೋಗಾಂಗನೆ ದೇವ |

ನಿತ್ಯ ನಿರಂಜನ ನಿರ್ಮಲ ದೇವ | ನಮೋ ||ಓಂ ||


ಜಯ ಗಂಗಾಧರ ನಮಿಸುವೆ ಸತತ

ಶ್ರೀಹರ ಶಂಕರ ಬೇಡುವೆ ನಿರುತ |

ಪಾರ್ವತಿನಾಥ ಪಾಲಿಸು ಧಾತ |

ಪಾವನುಧ್ಧಾರ ಪಾವನಚರಿತ | ನಮೋ ||ಓಂ ||

Comments

Popular Posts