ಬೆಳ್ಳಿ ಬೆಟ್ಟದೋಳ್
ಬೆಳ್ಳಿ ಬೆಟ್ಟದೋಳ್ ನೆಲೆಸಿರುವ
ನಮ್ಮ ಭಸ್ಮಧಾರಿಯ ಇಂದು ನೋಡುವ |
ನಮ್ಮ ಭಸ್ಮಧಾರಿಯ ಇಂದು ನೋಡುವ ||ಪ||
ಅವನೆ ನಮ್ಮ ಮನೆಗೆ ಬಂದು
ಕಷ್ಟಗಳನು ದೂರ ಮಾಡಿ |
ವೇಗದಿಂದ ಕಾಪಾಡುವ ||ಅ ಪ||
ಭಕ್ತರೆಲ್ಲ ಕೊಡಿಕೊಂಡು
ಭಜನೆಯನ್ನು ಮಾಡಿಕೊಂಡು |
ವೇಷ ಮಾಡಿ ಹಾಡಿ ನಲಿಯುವ ||ಬೆಳ್ಳಿ||
ಪಾರ್ವತಿಯ ಗಂಡನಂತೆ
ಮೂರು ಲೋಕಕೊಡೆಯನಂತೆ |
ಮೂರು ಕಣ್ಣ ಮೂರುತಿಯಂತೆ ||ಬೆಳ್ಳಿ||
ಕೈಯಲ್ಲೊಂದು ಜಪದ ಸರ
ಮೈಯಲ್ಲೊಂದು ಸುಟ್ಟ ಚರ್ಮ |
ತಿಲಕಮಂಡಲ ಧಾರಿಯಂತೆ ||ಬೆಳ್ಳಿ||
Comments
Post a Comment