ಪಾಲಿಸೈ ನಮಗಾಸು

 

ಪಾಲಿಸೈ ನಮಗಾಸು ವಿದ್ಯೆಗಳ
ವರದೇ ಶಾರದೆ, ಪಾಲಿಸೈ ನಮಗಾಸು ವಿದ್ಯೆಗಳ ||ಪ||

ಕಾಲಕಾಲಕೆ ಲೀಲೆಯಿಂದಲಿ ಶಾಲೆಯೊಳು ನಮಗೆ |
ಮೇಲು ವಿದ್ಯೆಯ ಪಾಲಿಸೆಮಗೆ ವರ |
ಶೀಲೆ ಗುಣಲೋಲೆ ಪರಿಪಾಲಿಸೆಮಗೆ ||ಪಾಲಿಸೈ||

ವೀಣೆ ಪುಸ್ತಕ ಪಾಣಿ ಶಾರದೆ ವಾಣಿ ಕಲ್ಯಾಣಿ |
ಮಾನದೆಮ್ಮೊಳು ಸಾನುರಾಗದಿ |
ವಾಣಿ ಕಲ್ಯಾಣಿ ಗುಣಶ್ರೇಣಿಯೇ ನೀ ದಯ ||ಪಾಲಿಸೈ||

ದೀನ ಬಾಲರಿಗೊನವಿಲ್ಲದೆ ಜ್ಞಾನಗಳನೆಲ್ಲ |
ಭಾನು ತೇಜದಿ ಸಾನಹಾಸ್ಯದಿ |
ಜ್ಞಾನೆ ನಿದಾನೆ ಸುಗಾನೆ ಮಂದದಿ ದಯ ||ಪಾಲಿಸೈ||

 

Comments

Popular Posts