ಎಲ್ಲಿರುವೆ ತಂದೆ ಬಾರೋ
ಎಲ್ಲಿರುವೆ ತಂದೆ ಬಾರೋ ಗುರು ಮಾರುತಿ
ಎಲ್ಲಿರುವೆ ತಂದೆ ಬಾರೋ ||ಪ||
ಎಲ್ಲೆಲ್ಲಿ ನೋಡಿದರು ಅಲ್ಲಿ ನಿನ್ನ ಕೀರುತಿ |
ಅಲ್ಲಲ್ಲಿ ನೀನಿರುತೀ, ಮಾರುತಿ ||ಅ ಪ||
ಅಂದು ರಘುನಂದನಗೆ
ವಂದಿಸುತ ಇಂದಿರೆಯ |
ಕಂಡು ಕೊಂಡಾಡಿದೆಲೋ ಮಾರುತಿ ||ಎಲ್ಲಿರುವೆ||
ರಂಗನ ಅರ್ಧಾಂಗಿಗೆ ನೀ ಉಂಗುರವನಿತ್ತು |
ವನಭಂಗವಗೈದೆಯಲ್ಲೋ ||ಎಲ್ಲಿರುವೆ||
ಶೇಷಗಿರಿವಾಸಗೆ ನೀ ದಾಸನೆಂದು ನಂಬಿದ |
ಈ ದಾಸಗೆ ದಯ ಮಾಡೋ ಮಾರುತಿ ||ಎಲ್ಲಿರುವೆ||
Comments
Post a Comment