ಗಜವದನ ಪಾಲಿಸೋ
ಗಜವದನ ಪಾಲಿಸೋ, ಲಾಲಿಸೋ |
ತ್ರಿಜಗದೊಡೆಯ ಶ್ರೀ ಭುಜಗ ಭೂಷಣನೆ ।।ಪ॥
ಏಸು ದಿನಕೆ ನಿನ್ನ ವಾಸವ ಪೊಗಳುವೆ |
ಲೇಸ ಪಾಲಿಸೊ ನಿತ್ಯ ವಾಸವನುತನೆ ||ಗಜವದನ||
ಭಕ್ತಿಯೊಳು ಭಜಿಪೆನು ರಕ್ತಾಂಬರಧರ |
ಮುಕ್ತಿ ಪಥವೀಯೋ ಶಕ್ತಿ ಸ್ವರೂಪನೆ ||ಗಜವದನ||
ಪೊಡವಿಯೊಳಗೆ ನಿನ್ನ ಬಿಡುವರಾರೋ |
ಕಡು ಹರುಷದಿ ಕಾಯೋ ವಿಜಯ ವಿಟ್ಟಲ ದಾಸ ||ಗಜವದನ||
Comments
Post a Comment