ದೇವಕಿ ಕಂದ ಮುಕುಂದ

 

ದೇವಕಿ ಕಂದ ಮುಕುಂದ ||ಪ|| 


ನಿಗಮೋದ್ಧಾರ ನವನೀತ ಚೋರ |

ಖಗಪತಿ ವಾಹನ ಜಗದೋದ್ಧಾರ ||ದೇವಕಿ||


ಶಂಖಚಕ್ರಧರ ಶ್ರೀಗೋವಿಂದ |

ಪಂಕ್ಜಲೋಚನ ಪರಮಾನಂದ ||ದೇವಕಿ||


ಮಕರಕುಂಡಲಧರ ಮೋಹನ ವೇಷ |

ರುಕುಮಿನಿವಲ್ಲಭ ಪಾಂಡವಪೋಷ ||ದೇವಕಿ||


ಕಂಸಮರ್ದನ ಕೌಸ್ತುಭಾಭರಣ |

ಹಂಸವಾಹನ ಪೂಜಿತ ಚರಣ ||ದೇವಕಿ||


ವರ ವೇಲಾಪುರ ಚೆನ್ನಪ್ರಸನ್ನ |

ಪುರಂದರವಿಠಲನ ಸಕಲಗುಣಪೂರ್ಣ ||ದೇವಕಿ||

Comments

Popular Posts