ನಮಿಪೆನು ಶಾರದೆಯೇ

 

ನಮಿಪೆನು ಶಾರದೆಯೇ ತಾಯೇ
ನಮಿಪೆನು ಶಾರದೆಯೇ ||ಪ||

ವೀಣಾಪಾಣಿಯೇ ಬ್ರಹ್ಮನ ರಾಣಿಯೇ |
ಪುಸ್ತಕ ಧಾರಿಣಿ ಪೂಜಿಪೆ ವಾಣಿ ||ನಮಿಪೆನು||

ನಾರದ ಮಾತೆಯೇ ನಮಿಪೆ ನಳಿನಾಕ್ಷಿಯೇ |
ವರವನು ಕರುಣಿಸು ವಾಗೀಶ್ವರಿಯೇ ||ನಮಿಪೆನು||

ರಾಮಾಭಿದಾನದಿಂ ವಂದಿಪೆ ವರದೆಯೇ |
ಪ್ರೇಮದಿ ಎಮ್ಮನು ಸಲಹು ತಾಯೆ ||ನಮಿಪೆನು||

Comments

Popular Posts