ಶಂಕರ ಶೂಲಧರ
ಶಂಕರ ಶೂಲಧರ ಮಹೇಶ್ವರ |
ಶಂಕರ ಶೂಲಧರಾ ಮಹೇಶ್ವರ ||ಪ||
ಕಿಂಕರ ವರದ ಭಯಂಕರ ಪುರಹರ |
ಸಂಚಿತ ಪಾಪಹರ ಮಹೇಶ್ವರ || ಶಂಕರ ||
ಅಂಧಕ ದಮನ ಪುರಂದರ ಸುಮನಸ |
ವಂಚಿತ ಮುನಿನಿಕರ ಮಹೇಶ್ವರ ||ಶಂಕರ ||
ಗೌರಿ ಶಂಕರ ಗೌರವ ಶುಭಕರ |
ಧೀರ ವಿಶ್ವೇಶ್ವರ ಸ್ವಾಮಿ ಸದಾಶಿವ ||ಶಂಕರ ||
ಶ್ರೀ ವಾಸುದೇವ ದಾಮೋದರ ಸಖಶಿಬಿ |
ಶ್ರೀವರ ಶಶಾಂಕಧರ ಮಹೇಶ್ವರ ||ಶಂಕರ||
Comments
Post a Comment