ಆಡುತ ಬಾರಮ್ಮ
ಆಡುತ ಬಾರಮ್ಮ ನಲಿ ನಲಿದಾಡುತ ಬಾರಮ್ಮ ||ಪ||
ಆಡುತ ವರಗಳ ನೀಡುತ ದಯದಲಿ |
ಬೇಡಿದವರಿಗೆ ಇಷ್ಟಾರ್ಥವ ನೀಡುತ ||ಅ. ಪ||
ಬೇಸರವು ಬೇಡಮ್ಮಾ ನಿಮ್ಮಯ ದಾಸರ ದಾಸನು ನಾ ತಾಯೆ |
ವಾಸನ ಪೂರಿತೆ ವನರುಹನೇತ್ರೆ |
ಸಾಸಿರ ನಾಮದ ವಾಸುದೇವನ ಸತಿ ||ಆಡುತ||
ಕರೆದರೆ ಓ ಎಂದು ಭಕ್ತರ ಮೊರೆಯಲಾಲಿಸಿ ಬಂದು ತಾಯೆ |
ಕರುಣದಿ ಶರಣರ ಪೊರೆದು ರಕ್ಷಿಸುವಂತ
ಮುರಹರ ವೆಂಕಟರಮಣನರ್ಧಾಂಗಿಯೇ ||ಆಡುತ||
ಧರೆಯೊಳಧಿಕವಾದ ಪುಳಿನಾ ಪುರದೊಳು ನೆಲೆಯಾದ ತಾಯೆ|
ಶರಣಾಗತರಿಗೆ ಉನ್ನತ ವರ ವೀವ
ಶ್ರೀ ಗುರುದತ್ತಾತ್ರೆಯ ರಾಜರಾಜೇಶ್ವರಿ ||ಆಡುತ||
Comments
Post a Comment