ಕುಣಿಯುತ ನಲಿಯುತ
ಕುಣಿಯುತ ನಲಿಯುತ ಬಾ ಶಂಕರ |
ಮಣಿಯುವೆ ನಿನ್ನಡಿಗಳಿಗೆ ನಾನೆರಗುವೆ ||ಪ||
ಢಮಢಮಢಮ ಎಂದು ಡಮರುಗ ದ್ವಾನಿಸಲು
ಠಣಠಣಠಣ ಎಂದು ವೃಷಭವು ನಲಿಯೇ |
ಝಣ ತಕ ತಕ ಝಣ ತಾಕಿಟ ತಕ ಕಿಟ |
ಝಣ ಎಂದು ನಂದಿ ಮೃದಂಗವ ಬಾರಿಸಲು ||ಕುಣಿಯುತ ||
ಹರ ಹರ ಹರ ಎಂದು ಗಣಗಳು ತುತಿಸೆ
ಪೊರೆಯಂದಹಿವಿದ್ದು ಗಂಗೆಯು ನಮಿಸೆ |
ಸರಿಗಮಪದನಿಸ ಸ್ವರಗಳು ಪಾಡುತ |
ನಾರದ ತುಂಬುರ ಗಾನವ ಮಾಡಲು ||ಕುಣಿಯುತ||
ವರಕಮಲೆಶನ ಚರಿತೆಯ ಜಗದೊಳು
ಪರಿಪರಿ ಭಾವದಿ ನರ್ತಿಸಿ ತೋರುತ |
ಪೊರೆಯುತ ಭಕುತರ ವರವೀಯುತ ಬಾ |
ಗಿರಿಜಾಲಿಂಗಿತ ನಾಟ್ಯಾಚಾರ್ಯ ||ಕುಣಿಯುತ||
Comments
Post a Comment