ದಿನಕರನುದಿಸಿದನು
ದಿನಕರನುದಿಸಿದನು ಧರೆಯೊಳಗೆ
ದಿನಕರನುದಿಸಿದನು |
ದಾನವ ಕುಲದಲಿ ಕ್ಷೋಣಿಯೊಳಗೆ ||ಪ||
ಪ್ರಥಮ ಪ್ರಲ್ಹಾದನಾಗಿ ಅವತಾರ ಮಾಡಿ
ಸತತ ಹರಿಯ ನುತಿಸಿ |
ಮತಿಹೀನನಾದ ತಂದೆಗೆ ನರಹರಿ ರೂಪ
ರತಿಯಿಂದ ತೋರಿದ ಪ್ರಲ್ಹಾದರಾಯರೆಂಬ ||ದಿನಕರ||
ವ್ಯಾಸಮುನಿಯ ಎನಿಸಿ
ಸೋಸಿಲಿಂಗವಾಸವನುತನ ಭಜಿಸಿ |
ದಾಸನೆಂದು ಮೆರೆದಿ ನವ ವೃಂದಾವನದಿ
ಸೋಸಿಲಿ ಕರೆದರೆ ವಾಸ ಮಾಡುವುದಕ್ಕೆ ||ದಿನಕರ||
ತುಂಗಭದ್ರೆ ನದಿಯ ತೀರದಿ
ಮಂಗಳ ಮಂತ್ರಾಲಯ ಸ್ಥಳದಿ |
ಅಂಗಜ ಪಿತ ನಮ್ಮ ಐಹೊಳೆ ವೆಂಕಟನ
ಕಂಗಳಿಂದ ಕಂಡ ಗುರು ರಾಘವೇಂದ್ರನೆಂಬ || ದಿನಕರ||
Comments
Post a Comment