ಎಂಥಾ ಬಲವಂತನೋ
ಎಂಥಾ ಬಲವಂತನೋ, ಕುಂತಿಯ ಸಂಜಾತನೋ || ಪ ||
ಭಾರತಿಗೆ ಕಾಂತನೋ, ನಿತ್ಯ ಶ್ರೀಮಂತನೋ || ಅಪ ||
ರಾಮಚಂದ್ರಗೆ ಪ್ರಾಣನೋ, ಅಸುರ ಹೃದಯ ಬಾಣನೋ |
ಖಳರ ಗಂಟಲ ಗಾಣನೋ , ಜಗದೊಳಗೆ ಪ್ರವೀಣನೋ || ಎಂಥಾ ||
ಬಂಡಿ ಅನ್ನವನುಂಡನೋ, ಬಕನ ಪ್ರಾಣವ ಕೊಂಡನೋ |
ದ್ರೌಪದಿಗೆ ಗಂಡನೋ, ಭೀಮ ಪ್ರಚಂಡನೋ || ಎಂಥಾ ||
ವೈಷ್ಣವಾಗ್ರಗಣ್ಯನೋ, ಸಂಚಿತಾಗ್ರಪುಣ್ಯನೋ |
ದೇವಾವರೇಣ್ಯನೋ, ದೇವಾಶರಣ್ಯನೋ || ಎಂಥಾ ||
ಮಧ್ವಶಾಸ್ತ್ರ ರಚಿಸಿದನೋ, ಸದ್ವೈಷ್ಣವರ ಸಲಹಿದನೋ |
ಉಡುಪಿಲಿ ಕೃಷ್ಣನ ನಿಲಿಸಿದನೋ, ಪುರಂದರ ವಿಠಲಗೆ ದಾಸನೋ || ಎಂಥಾ ||
Comments
Post a Comment