ಮೂರುತಿಯನೆ ನಿಲ್ಲಿಸೋ

 

ಮೂರುತಿಯನೆ ನಿಲ್ಲಿಸೋ ಮಾಧವ 
ನಿನ್ನ ಮೂರುತಿಯನೆ ನಿಲ್ಲಿಸೋ ||ಪ.||

ಎಳೆತುಳಸಿಯ ವನಮಾಲೆಯು ಕೊರಳೊಳು
ಹೊಳೆವ ಪೀತಾಂಬರದಿಂದಲೊಪ್ಪುವ ನಿನ್ನ ||ಮೂರುತಿ||

ಮುತ್ತಿನ ಸರ ನವರತ್ನದುಂಗುರವಿಟ್ಟು
ಮತ್ತೆ ಶ್ರೀ ಲಕುಮಿಯು ಉರದಲೊಪ್ಪುವ ನಿನ್ನ ||ಮೂರುತಿ||

ಭಕ್ತರ ಕಾಮೇಧೇನು ಕಲ್ಪತರೂ ಎಂಬೊ
ಮುಕ್ತಿದಾಯಕ ನಮ್ಮ ಪುರಂದರವಿಠಲ ನಿನ್ನ ||ಮೂರುತಿ|| 

Comments

Popular Posts