ದಾಸೋಹಂ ತವ ದಾಸೋಹಂ
ದಾಸೋಹಂ ತವ ದಾಸೋಹಂ ||ಪ||
ವಾಸುದೇವ ವಿಗತಾಘ ಸಂಘತವ ||ಅ.ಪ||
ಜೀವಾಂತರ್ಗತ ಜೀವ ನಿಯಾಮಕ
ಜೀವ ವಿಲಕ್ಷಣ ಜೀವನದ |
ಜೀವಾಧಾರಕ ಜೀವರೂಪ
ರಾಜೀವ ಭವ ಜನಕ ಜೀವೇಶ್ವರ ತವ ||ದಾಸೋಹಂ||
ಕಾಲಂತರ್ಗತ ಕಾಲನಿಯಮಕ
ಕಾಲಾತೀತ ತ್ರಿಕಾಲಙ್ಞ |
ಕಾಲಪ್ರವರ್ತಕ ಕಾಲನಿವರ್ತಕ
ಕಾಲೋತ್ಪಾದಕ ಕಾಲ ಮೂರ್ತಿ ತವ ||ದಾಸೋಹಂ||
ಕರ್ಮಕರ್ಮಕೃತ ಕರ್ಮ ಕೃತಾಗಮ
ಕರ್ಮ ಫಲಪ್ರದ ಕರ್ಮಜಿತ |
ಕರ್ಮ ಬಂಧ ಮಹ ಕರ್ಮವಿಮೋಚಕ
ಕರ್ಮನಿಗ್ರನ ವಿಕರ್ಮನಾಶ ತವ ||ದಾಸೋಹಂ||
ಧರ್ಮಯೂಪಮಹ ಧರ್ಮವಿವರ್ಧನ
ಧರ್ಮವಿದುತ್ತಮ ಧರ್ಮನಿಧೇ |
ಧರ್ಮ ಸೂಕ್ಷ್ಮ ಮಹ ಧರ್ಮಸಂರಕ್ಷಕ
ಧರ್ಮಸಾಕ್ಷಿ ಯಮಧರ್ಮ ಮಿತ್ರ ತವ ||ದಾಸೋಹಂ||
ಮಂತ್ರ ಯಂತ್ರ ಮಯ ಮಂತ್ರ ಬೀಜ
ಮಯ ಮಂತ್ರ ರಾಜಗುರು ಮಂತ್ರ ದಿತಾ |
ಮಂತ್ರ ಮೇಯ ಮಹ ಮಂತ್ರಗಮ್ಯ
ವರಮಂತ್ರ ದೇವ ಜಗನ್ನಾಥ ವಿಠಲ ತವ ||ದಾಸೋಹಂ||
Comments
Post a Comment