ರಾಧೇ ಶ್ಯಾಮ್ ರಾಧೇ ಶ್ಯಾಮ್

 

 ರಾಧೇ  ಶ್ಯಾಮ್ ರಾಧೇ  ಶ್ಯಾಮ್ 
ರಾಧಾ ಮಾಧವ ರಾಧೇ ಶ್ಯಾಮ್  ||ಪ||

ಆದಿ ನಾರಾಯಣ ರಾಧೇ  ಶ್ಯಾಮ್ 
ಅನಾದಿ ಪುರುಷ ಮೇಘ ಶ್ಯಾಮ್ ।
ವಾಸುದೇವ  ಹರಿ ರಾಧೇ  ಶ್ಯಾಮ್ 
ವಾಸುಕಿತನಯನೇ   ಮೇಘ ಶ್ಯಾಮ್ ।।ರಾಧೇ।।

ದೇವಕಿ ತನಯ ರಾಧೇ  ಶ್ಯಾಮ್ 
ದೇವ ದೇವ ಹರಿ ಮೇಘ ಶ್ಯಾಮ್ ।
ಸರಸಿಜ ನಯನ   ರಾಧೇ  ಶ್ಯಾಮ್ 
ಗೋವುಗಳ  ಪ್ರಿಯ ಹರಿ ಮೇಘ ಶ್ಯಾಮ್ ।।ರಾಧೇ।।

ಪೂತನಿ ಮರ್ಧನ ರಾಧೇ  ಶ್ಯಾಮ್ 
ಶಕಟ  ಸಂಹಾರಿ ಮೇಘ ಶ್ಯಾಮ್ ।
ಮಾತುಳ ಧ್ವಂಸಿ ರಾಧೇ  ಶ್ಯಾಮ್ 
ಅನಾಥ ರಕ್ಷಕ ಮೇಘ ಶ್ಯಾಮ್ ।।ರಾಧೇ।।

ಮುರಳಿ ಮನೋಹರ ರಾಧೇ  ಶ್ಯಾಮ್ 
ನರಕಾಂತಕ  ಹರಿ ಮೇಘ ಶ್ಯಾಮ್ ।
ಕರುಣಾಕರ ಹರಿ ರಾಧೇ  ಶ್ಯಾಮ್  
ಕರುಣಿಸಿ ಪೊರೆ ಹರಿ ಮೇಘ ಶ್ಯಾಮ್ ।।ರಾಧೇ।।

ಪಾಂಡವ ಪ್ರಾಣನೇ  ರಾಧೇ  ಶ್ಯಾಮ್ 
ಪಾಂಡವ ತ್ರಾಣನೇ  ಮೇಘ ಶ್ಯಾಮ್ |
ಪಾಂಡವ ರಕ್ಷಕ ರಾಧೇ  ಶ್ಯಾಮ್ 
ಕೌರವ ಶಿಕ್ಷಕ ಮೇಘ ಶ್ಯಾಮ್ ।।ರಾಧೇ।।

ಗೋಪಿ ಜನ ಪ್ರಿಯ ರಾಧೇ  ಶ್ಯಾಮ್ 
ಗೋಪಿನಾಥನೇ  ಮೇಘ ಶ್ಯಾಮ್ ।
ಗೋಪಿಕವಲ್ಲಭ ರಾಧೇ  ಶ್ಯಾಮ್   
ಗೋಕುಲ ನಂದನ ಮೇಘ ಶ್ಯಾಮ್ ।।ರಾಧೇ।।

ಶ್ರೀಷ ರಮೇಶನೇ ರಾಧೇ  ಶ್ಯಾಮ್
ಕೇಶವ ಅಚ್ಚುತ ಮೇಘ ಶ್ಯಾಮ್ ।
ದೋಷ ಕ್ಷಮಿಸಿ ಪೊರೆ ರಾಧೇ  ಶ್ಯಾಮ್
ದಾಸ ಕೇಶವನುತ ಮೇಘ ಶ್ಯಾಮ್ ।।ರಾಧೇ।।

Comments

Popular Posts