ನಿನ್ನ ನಂಬಿದೆ ದೇವನೇ
ನಿನ್ನ ನಂಬಿದೆ ದೇವನೇ, ದೇವರ ದೇವಾ
ಚೆನ್ನ ಮೋಹನ ರೂಪನೇ || ಪ ||
ಬನ್ನ ಪಟ್ಟಿರುವೆನ್ನ ಚೆನ್ನಾಗಿ ಸಲಹುತ
ಸನ್ನುತ ಮುಕುತಿಯ ನೀಡೋ ಹೇ ಗಣನಾಥ ||ಅ ಪ||
ಗಿರಿಜೆಯ ಸುತನಾಗಿಹೆ ಗಿರಿಜಾತನಯ
ಹರನ ಪ್ರೇಮದ ಬಾಲನೆ |
ಕರಿಮುಖ ವಿಗ್ನೇಶ ಸುರನರ ಪೂಜಿತ
ವಾರದಹಸ್ತನೆ ಭಯ ತರಿದೊಗೆ ಗಣನಾಥ || ನಿನ್ನ||
ಕಡುಬು ಮೋದಕ ನೀಡುವೆ ಲಂಬೋದರ
ಕಡಲೆ ತಿನ್ನಲು ಕೊಡುವೆ |
ಜಡರುಹನಯನನೇ ಮೃಡಸುತ ಗಣಪನೆ
ಎಡೆಬಿಡದೆನ್ನನು ಸಲಹೋ ಹೇ ಗಣನಾಥ ||ನಿನ್ನ||
ಮಂದಮತಿಯು ನಾನಿಹೆ ವಂದ್ಯಾತ್ಮನೇ
ಮಂದ ಬುದ್ದಿಯ ನೀಗಿಸೊ |
ಕುಂದದ ಬಕುತಿಯ ಹೃದಯೊಡೊಲಿರಿಸುತೆ |
ಹೊಂದಿಸು ಮುಕುತಿಯ ಈಶ ಹೇ ಗಣನಾಥ ||ನಿನ್ನ||
Comments
Post a Comment