ಆರತಿ ಎತ್ತಿದರು
ಆರತಿ ಎತ್ತಿದರು ಭಕ್ತರು ಕೂಡಿ, ಆರತಿ ಎತ್ತಿದರು ||ಪ||
ಮಾರಹರ ತ್ರಿಶೂಲಧರನಿಗೆ |
ಘೋರ ದುರಿತ ವಿನಾಶ ಹರನಿಗೆ |
ಶೂಲ ಶಶಿಧರ ಗೌರಿ ರಾಮನಗೆ |
ಲೀಲೆಯಿಂದಲಿ ಮುತ್ತಿನಾರತಿ ||ಆರತಿ||
ಗಂಗೆಯನು ಶಿರದಲ್ಲಿ ಧರಿಸಿದ |
ತುಂಗ ವಿಕ್ರಮ ಚಾರು ರೂಪಾಗೆ |
ಗಂಗಾ ತೀರದಿ ನಿಂದು ಮೆರೆಯುವ |
ಮಂಗಳಾಂಗಾಗೆ ಮಂಗಳಾರತಿ ||ಆರತಿ||
ಮುನಿಪ ವಿದ್ಯಾಧರನ ಪೂಜ್ಯಗೆ |
ನಮಿಸುವೆವು ಅನವರತ ನಿನ್ನಯ |
ಕೀರ್ತಿಯನು ಬೆಳಗಿಪ ಸುರೇಶಗೆ |
ಅರ್ತಿಯಲಿ ಕರ್ಪೂರದಾರತಿ ||ಆರತಿ||
Comments
Post a Comment