ಬೇಡಿಕೊಂಬೆನು ನಾ
ಬೇಡಿಕೊಂಬೆನು ನಾ
ನೀ ಎನ್ನ ಪಾಲಿಸು ತಾಯೇ ||ಪ||
ಕರಗಳ ಜೋಡಿಸುತಾ ನಾನು ಶಿರವ ಬಾಗುವೆನು |
ನಿನ್ನಾ ಚರಣಕೆರಗುವೆನು ||ಬೇಡಿ||
ಮಥುರಾಪುರನಿಲಯೇ ಮೀನಾಕ್ಷಿ ಮಹಿಷಮರ್ಧಿನಿಯೇ|
ದೇವೀ ಮುಕ್ತಿದಾಯಕಿಯೇ ||ಬೇಡಿ||
ಸದಾನಂದದಲೀ ನಿನ್ನ ಪಾದ ಕಮಲವನು |
ನಿತ್ಯಾ ಬಿಡದೆ ಪೂಜಿಪೆನು ||ಬೇಡಿ||
Comments
Post a Comment