ಜಯ ಗಣೇಶ
ಜಯ ಗಣೇಶ ಜಯ ಗಣೇಶ ಜಯ ಗಣೇಶ ರಕ್ಷಿಸು
ಜಯದ ಹಾದಿಯಲ್ಲಿ ಎಂದು ನಮ್ಮ ನೀನು ನಡೆಸು ||ಪ||
ಅಂಧಕಾರವನ್ನು ಸೂರ್ಯ ನಾಶ ಮಾಡುವಂತೆ
ನೀ ವಿಘ್ನಗಳನು ನಾಶ ಮಾಡಿ ನೀಗು ನಮ್ಮ ಚಿಂತೆ |
ಕಷ್ಟಗಳನು ನುಂಗಿ ಬೇಗ ಸುಖ:ದ ದಾರಿ ತೋರಿಸು
ನೋವ ನೀಗಿ ಬಾಳಿನಲ್ಲಿ ನೆಮ್ಮದಿಯನು ಕರುಣಿಸು ||ಜಯ||
ಕಂಗಳಲ್ಲಿ ಸ್ವಾಮಿ ನಿನ್ನ ದಿವ್ಯ ಮೂರ್ತಿ ತುಂಬಲಿ
ಕಿವಿಗಳಲ್ಲಿ ದಿನವು ನಿನ್ನ ಕೀರ್ತಿ ತುಂಬಿ ಹರಿಯಲಿ |
ನಮ್ಮ ಮನವು ಸದಾ ನಿನ್ನ ಧ್ಯಾನದಲ್ಲಿ ಮುಳುಗಲಿ
ನಿನ್ನ ಕರುಣೆಯಿಂದ ತಂದೆ ನಮ್ಮ ಬಾಳು ಬೆಳಗಲಿ ||ಜಯ||
Comments
Post a Comment