ಬಂದಳ್ ನೋಡೇ

ಬಂದಳ್ ನೋಡೇ ಬಂದಳ್ ನೋಡೇ ಮಂದಿರದೊಳು | 
ಭಾಗ್ಯದಲಕ್ಷ್ಮೀ ಬಂದಳು ನೋಡೇ ||ಪ||

ಅಂದುಗೆ ಕಿರು ಗೆಜ್ಜೆ ಘಿಲ್ ಘಿಲ್ಲೇನುತ |
ಮುದ್ದು ಪಾದದಿ ಹೆಜ್ಜೆಯನಿಕ್ಕುತ್ತಾ  ||ಭಾಗ್ಯದಲಕ್ಷ್ಮೀ||

ಎಡ ಬಲದಲ್ಲಿ ಗಜಗಳಿಂದ ಪೂಜೆಗೊಳ್ಳುತ | 
ಬಿಡದೆ ತನ್ನ ಕರ ಕಮಲದಿ ಅಭಯ ಕೊಡುತ ||ಭಾಗ್ಯದಲಕ್ಷ್ಮೀ||

ಅತಿ ಹರುಷದಿ ಹಿತದಿ ತನ್ನ ಪತಿಯ ಸಹಿತಾಗಿ | 
ವಾರಿನೋಟದಿಂದ ಭಕ್ತರಿಗೆ ವರವ ಕೊಡುತಲಿ ||ಭಾಗ್ಯದಲಕ್ಷ್ಮೀ||

ಸೃಷ್ಟಿಗೊಡೆಯ ತಂದೆ ಜಗನ್ನಾಥವಿಠ್ಠಲನ | 
ಪಟ್ಟದರಸಿ ಅರ್ತಿಯಿಂದಲಿ ಭಕ್ತರ ಮನೆಗೆ  ||ಭಾಗ್ಯದಲಕ್ಷ್ಮೀ||

 

Comments

Popular Posts