ಒಂದು ಬಾರಿ ಸ್ಮರಣೆ

 

ಒಂದು ಬಾರಿ ಸ್ಮರಣೆ ಸಾಲದೆ 

ಆನಂದ ತೀರ್ಥರ, ಪೂರ್ಣಪ್ರಜ್ಞರ, ಸರ್ವಜ್ಞರಾಯರ, ಮಧ್ವರಾಯರ    ।।ಪ।।


ಹಿಂದನೇಕ ಜನ್ಮಗಳಲಿ ನೊಂದು ಯೋನಿಯಲ್ಲಿ ಬಂದು |

ಇಂದಿರೇಶ ಹರಿಯ ಪಾದವ ಹೊಂದಬೇಕೆಂಬುವರಿಗೆ                 ।।ಒಂದು।।


ಆರುಮಂದಿ ವೈರಿಗಳನು ಸೇರಲೀಸದಂತೆ ಜರಿದು |

ಧೀರನಾಗಿ ಹರಿಯ ಪಾದವ ಸೇರಬೇಕೆಂಬುವರಿಗೆ                      ।।ಒಂದು।।


ಘೋರ ಸಂಸಾರಾಂಬುಧಿಗೆ ಪರಮಜ್ಞಾನವೆಂಬ ವಾಡೆ | 

ಏರಿ ಮೆಲ್ಲನೆ ಹರಿಯ ಪಾದ ಸೇರಬೇಕೆಂಬುವರಿಗೆ                       ।।ಒಂದು।।


ಹೀನಬುದ್ಧಿಯಿಂದ ಶ್ರೀಹಯವದನನ ಜರಿದು |

ತಾನು ಬದುಕಲಾರದಿರಲು ತೋರಿಕೊಟ್ಟ ಮಧ್ವಮುನಿಯ          ।।ಒಂದು।।

Comments

Popular Posts