ಶರಣು ಸಕಲೋದ್ಧಾರ

 

ಶರಣು ಸಕಲೋದ್ಧಾರ, ಅಸುರ ಕುಲ ಸಂಹಾರ

ಶರಣು ದಶರಥ ಬಾಲ, ಜಾನಕೀ ಲೋಲ ||ಪ||


ಈ ಮುದ್ದು ಈ ಮುಖವು ಈ ತನುವಿನಾ ಕಾಂತಿ

ಈ ಬಿಲ್ಲು ಈ ಬಾಣ ಈ ನಿಂತ ಭಾವ |

ಈ ತಮ್ಮ ಈ ಸೀತೆ ಈ ಬಂಟ ಈ ಭಾಗ್ಯ

ಯಾವ  ದೇವರಿಗುಂಟು ಮೂರುಲೋಕದೊಳಗೆ ||ಶರಣು||


ಉಟ್ಟ ಪೀತಾಂಬಾರವು ಉಡಿಗೆಜ್ಜೆ ಮಾಣಿಕವೂ

ದೊಡ್ಡ ನವರತ್ನದ ಆಭರಣ ಇರಲು |

ಕೊಟ್ಟ ಭಾಷೆಗೆ ತಪ್ಪ ನಿಜಭಕ್ತರಿಗೆ ಒಲಿವ

ಸೃಷ್ಟಿಯೊಳಗೆ ಕಾಣೆ ಕೌಸಲ್ಯರಾಮ ||ಶರಣು||


ಪಾಲಿಸಲು ಅಯೋಧ್ಯ ಪಟ್ಟಣದಲಿ ವಾಸ

ಬೇಡಿದ ಇಷ್ಟಾರ್ಥಗಳ ಕೊಡುವೆನೆನುತಿರಲು |

ಭಾವ ಶುದ್ಧಿಯುಳ್ಳ ತನ್ನ ಭಕುತರ ಪೊರೆವ

ಪುರಂದರ ವಿಟ್ಟಲನೆ ರಘುರಾಮ ||ಶರಣು||

Comments

Popular Posts