ಮಾಡು ಸಿಕ್ಕದಲ್ಲಾ
ಮಾಡು ಸಿಕ್ಕದಲ್ಲಾ ಮಾಡಿನ ಗೂಡು ಸಿಕ್ಕದಲ್ಲ |
ಜೋಡು ಹೆಂಡರಿಗಂಜಿ ಓಡಿ ಹೋಗುವಾಗ
ಗೋಡೆ ಬಿದ್ದು ಬಯಲಾಯಿತಲ್ಲ ||ಪ||
ಎಚ್ಚರಗೊಳಲಿಲ್ಲ ಮನವೆ ಹುಚ್ಚನಾದೆನಲ್ಲ |
ಅಚ್ಚಿನೊಳಗೆ ಮೆಚ್ಚು ಮೆಚ್ಚಿನೊಳಗೆ ಅಚ್ಚು
ಕಿಚ್ಚೆದ್ದು ಹೋಯಿತಲ್ಲ || ಮಾಡು ||
ಮುಪ್ಪು ಬಂದಿತಲ್ಲ ಪಾಯಸ ತಪ್ಪದೆ ಉಣಲಿಲ್ಲ|
ತುಪ್ಪದ ಬಿಂದಿಗೆ ತಿಪ್ಪೆ ಮೇಲೆ
ದೊಪ್ಪನೆ ಬಿತ್ತಲ್ಲಾ || ಮಾಡು ||
ಯೋಗವು ಬಂತಲ್ಲಾ ಬದುಕು ವಿಭಾಗವಾಯಿತಲ್ಲ |
ಭೋಗಿಶಯನ ಶ್ರೀ ಪುರಂದರ ವಿಠಲನ
ಆಗ ನೆನೆಯಲಿಲ್ಲಾ || ಮಾಡು ||
Comments
Post a Comment