ಭಿಕ್ಷವ್ಯಾತಕೋ
ಭಿಕ್ಷವ್ಯಾತಕೋ ಪಾಲಾಕ್ಷ ನಿನಗೆ
ಲಕುಮಿಪತಿಯೆಂಬ ಸಖನಿದ್ದ ಬಳಿಕ ।।ಪ।।
ರಜತಾದ್ರಿ ಅರಮನೆಯು ಹೇಮಗಿರಿಯೇ ಧನವು
ಗಜಗಮನ ಸುರನಿಕರ ಪರಿವಾರವು |
ಭುಜಗಪತಿ ಭೂಷಣನು ನಿಜರಾಣಿ ಅನ್ನಪೂರ್ಣೆ
ಗಜಮುಖನೆ ಮೊದಲಾದ ಮಕ್ಕಳಿರಲು ।।ಭಿಕ್ಷ।।
ಬೇಡುವುದು ಬಿಟ್ಟು ನಿನ್ನೆತ್ತು ಯಮನಿಗೆ ಕೊಟ್ಟು
ಮಾಡಬಾರದೆ ಮುಯ್ಯ ಅವನ ಕೋಣ |
ಜೋಡು ಮಾಡಿಕೊಂಡು ಬಾತಿಮುಟ್ಟು ತ್ರಿಶೂಲ
ಬೇಡಿದ್ದು ಆಗದೆ ಬರಿದೆ ಧಾವತಿಗೊಂಬೆ ।।ಭಿಕ್ಷ।।
ರೊಕ್ಕ ರುಪಾಯಿಗಳು ಬೇಕೆಂಬಿಯಾ ಸಾಲ
ತಕ್ಕೊ ಬಾರದೆ ಗೆಳೆಯ ಧನಪನಲ್ಲಿ |
ಶುಕ್ರ ಒಕ್ಕಣ್ಣ ಮೋಹನ ವಿಠಲ ಇಕ್ಕಣ್ಣ
ಮುಕ್ಕಣ್ಣ ನೀನಾಗಿ ಮುಂಜಿ ಮಂತ್ರವ ಬಿಡದೆ ।।ಭಿಕ್ಷ।।
Comments
Post a Comment