ನಂಬು ನಾರಾಯಣನ

 

ನಂಬು ನಾರಾಯಣನ ನಂಬೋ ನರಹರಿಯ

ನಂಬಿದಾ ಭಕ್ತರ ಕುಟುಂಬ ಸಾರಥಿಯ ||ಪ||


ಬಲಿ ನಂಬಿ ಪಾತಾಳಲೋಕಕರಸಾದನ

ದೆಕುಲದ ಪ್ರಹ್ಲಾದನು ನಿಜವ ಕಂಡ |

ಕಲಿ ವಿಭೀಷಣ ನಂಬಿ ಲಂಕೆಯಲಿ ಸ್ಥಿರವಾದ

ಛಲದ ಪಾರ್ಥನು ನಂಬಿ ವಿಶ್ವರೂಪವ ಕಂಡ ||ನಂಬು||


ಅಂಬರೀಷನು ನಂಬಿ ವೈಕುಂಠವೇರಿದನು

ಹಂಬಲಿಸಿ ಶಶಿಧರನು ಉರಿಯ ಗೆದ್ದ |

ಕುಂಭಿನೀದೇವಿ ತಾ ಬಂಧನವ ಕಳೆದಳು

ಅಂಬುಜಾಕ್ಷಿ ದ್ರೌಪದಿಯು ಮಾನ ಉಳುಹಿಕೊಂಡಳು||ನಂಬು||


ಅತಿ ಭಕುತರಿಗೆ ಮೆಚ್ಚಿ ಗತಿಮೋಕ್ಷವನಿತ್ತನು

ಮತಿಭ್ರಷ್ಟ ಅಜಮಿಳನ ಉದ್ಧರಿಸಿದನು

ಕ್ಷಿತಿಯೊಳಗೆ ಕಾಗಿನೆಲೆಯಾದಿಕೇಶವರಾಯ

ಪತಿತ ಪಾವನ ಪರಮಪುರುಷೋತ್ತಮನನು ||ನಂಬು||

Comments

Popular Posts