ಎನ್ನ ಪಾಲಿಸೋ ಕರುಣಾಕರ
ಎನ್ನ ಪಾಲಿಸೋ ಕರುಣಾಕರ ।
ಪನ್ನಗಶಯನ ಗದಾಧರ ||ಪ||
ದೇವಕಿನಂದನ ಹರಿಮಧುಸೂದನ ।
ಅಸುರಾಂತಕನ ಮುರಳೀಧರ ।
ಬಿಸರುಹನಾಭ ಸರ್ವೇಶನೆ
ಮುನಿಮಾನಸಸಂಚಾರ ಮಾಧವ ॥ಎನ್ನ॥
ಪರಮಪುರುಷನ ಉರಗಾಶನವಾಹನ ।
ಕರುಣಾರ್ಣವ ವಡವಾನಲ ।
ಸರಸಿಜೋದ್ಭವನ ಗಿರಿಜಾವಲ್ಲಭನ ।
ವರಸುಜನಾವಳಿಪಾಲನ ॥ಎನ್ನ॥
ಕಾವನಪಿತನ ಮುಚಕುಂದವರದನ
ರಾಜೀವನಯನ ನಾರಯಣ ।
ಶ್ರೀವತ್ಸಲಾಂಛನ ಗುರುಮಹೀಪತಿ ಸುತ ।
ಜೀವನಸಖ ಶ್ರೀಕೃಷ್ಣನೇ ॥ಎನ್ನ॥
Comments
Post a Comment