ಗೋವಿಂದ ನಿನ್ನ

 

 ಗೋವಿಂದ ನಿನ್ನ ನಾಮವೇ ಚೆಂದ                     || ಪ ||

ಅಣುರೇಣುತೃಣಕಾಷ್ಟ ಪರಿಪೂರ್ಣ ಗೋವಿಂದ |
ನಿರ್ಮಲಾತ್ಮಕನಾಗಿ ಇರುವುದೇ ಆನಂದ            || ಗೋವಿಂದ ||

ಸೃಷ್ಟಿ ಸ್ಥಿತಿ ಲಯ ಕಾರಣ ಗೋವಿಂದ 
ಈ ಪರಿ ಮಹಿಮೆಯ ತಿಳಿಯುವುದೇ ಆನಂದ  |   
ಮಂಗಳಮಹಿಮ ಶ್ರೀ ಪುರಂದರ ವಿಠಲನ 
ಹಿಂಗದೆ ಭಜಿಸುತ ಇರುವುದೇ ಆನಂದ             || ಗೋವಿಂದ||    

Comments

Popular Posts